ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ಮೂಲಕ ರಜನೀಶ್, ಪ್ರಸಾದ್ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಅವರು ನಿರ್ಮಿಸುತ್ತಿರುವ ‘ಅಂದರ್ ಬಾಹರ್ ಚಿತ್ರಕ್ಕಾಗಿ ಎ.ಪಿ.ಅರ್ಜುನ್ ಬರೆದಿರುವ ‘ನನ್ನ ವಂಶ ರಾಜಂದು ಹೆಸರೊಂದು ಮುತ್ತಿಂದು ಈ ಗುಂಡಿಗೆ ಭಾರಿ ಗಟ್ಟಿ ಏನೇ ಬಂದ್ರು ಫ಼ಿಫ಼್ಟಿ ಫ಼ಿಫ಼್ಟಿ ಅಂದರ್ ಬಾಹರ್ ಅಂದರ್ ಬಾಹರ್ ಎಂಬ ಹಾಡಿನ ಚಿತ್ರೀಕರಣ ನಗರದ ಅಬ್ಬಾಯಿನಾಯ್ಡು ಸ್ಟುಡಿಯೋ ಹಾಗೂ ಮೈಸೂರುಲ್ಯಾಂಪ್ಸ್ನಲ್ಲಿ ನಿರ್ಮಿಸಲಾಗಿದ್ದ ಐದು ವಿವಿಧ ಸೆಟ್ಗಳಲ್ಲಿ ನಡೆದಿದೆ. ಶಿವರಾಜಕುಮಾರ್ ಹಾಗೂ ವಿದೇಶಿ ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಫಣೀಶ್ ಎಸ್ ರಾಮನಾಥಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಪಾರ್ವತಿ ಮೆನನ್ ಚಿತ್ರದ ನಾಯಕಿಯಾಗಿದ್ದಾರೆ. ಅರುಂಧತಿನಾಗ್, ಶ್ರೀನಾಥ್, ಶಶಿಕುಮಾರ್, ಸೃಜನ್ಲೋಕೇಶ್, ರಘುರಾಂ, ಚಸ್ವ, ಸ್ಪೂರ್ತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಆಸ್ಕರ್ ಪ್ರಶಸ್ತಿ ಪಡೆದ ಜೈಹೋ ಹಾಡಿನಲ್ಲಿ ಹಾಡಿದ್ದ ವಿಜಯಪ್ರಕಾಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಶೇಖರ್ಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಜೋ.ನಿ.ಹರ್ಷ ಸಂಕಲನ, ಥ್ರಿಲ್ಲರ್ಮಂಜು, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಇಮ್ರಾನ್, ಹರ್ಷ, ಚಿನ್ನಿಪ್ರಕಾಶ್, ಪ್ರದೀಪ್ ಅಂತೋಣಿ ನೃತ್ಯ ನಿರ್ದೇಶನ ‘ಅಂದರ್ ಬಾಹರ್‘ ಚಿತ್ರಕ್ಕಿದೆ.